Home
Bookmark us APK
Community
Members
[ADD ME]
Follow @Siddappaji_Lord
Siddappaji.com :: It's one and only Sri Siddappaji Devotional Website! Download Free Lord-Siddappaji Images, Songs, Ringtones, Videos, Movies and Live more!
Gallery ►
Images ►
Musics ►
Ringtones ►
Videos ►
Movies ►
Live ►
Ebooks ►
Submit Your Files
️ 📝 WhatsApp
ಶ್ರೀ ಮಂಟೇಸ್ವಾಮಿಯವರ ಪುಣ್ಯಕ್ಷೇತ್ರಗಳ ದಶ೯ನ
ಶ್ರೀ ಬೊಪ್ಪೇಗೌಡನಪುರ ಪುಣ್ಯಕ್ಷೇತ್ರ
ಶ್ರೀ ಆದಿ ಹೊನ್ನಾಯಕನಹಳ್ಳಿ ಪುಣ್ಯಕ್ಷೇತ್ರ
ಶ್ರೀ ಚಿಕ್ಕಲ್ಲೂರು ಪುಣ್ಯಕ್ಷೇತ್ರ
ಶ್ರೀ ಕಪ್ಪಡಿ ಪುಣ್ಯಕ್ಷೇತ್ರ
ಶ್ರೀ ಕುರುಬನಕಟ್ಟೆ ಪುಣ್ಯಕ್ಷೇತ್ರ
# Siddappaji.com (Home Page)
ಶ್ರೀ ಸಿದ್ದಪ್ಪಾಜಿ ದೇವಾಲಯ ಹೊಸ ಮಠ, ಚಿಕ್ಕಲ್ಲೂರು - NEWS
Manteswamy is not amused
Published on: 2 Apr 2016
Banning of meat at Chikkallur fair by the govt and court shows complete lack of empathyAmong the weirdest paradoxes of our times, the meat ban during Chikkallur Siddappaji fair tops the list.Let me educate you.Chikkallur - Kappadi villages are in the Chamarajanagar district in Karnataka that have historical significance.
Since the 14th century, the folk legend of Siddappaji - Manteswamy is widely believed among certain communities. The Manteswamy folk epic has gained national importance with Central government cultural institutions giving huge grants to record, preserve, interpret and publish various versions of it. Folklorists of international repute have spent their lifetime collecting and documenting these epics. The social reformist movement of Basavanna, Allamaprabhu and other Veerashaiva saints in the 12th century reached its heights for over a century but gradually lost its force.Hence in the 14th century, yet again, a movement occurred where reformist saints like Rajappaji, Guheshwara, Sangappayya and their disciples Manteswamy, Tinthini Ponnappa and others tried torevive the Veerashaiva teachings but with a twist.
Manteswamy propagated that the way of life of the lowest segment of society was not to be looked down upon but should be upheld, and to prove his point he made a sheep shed as his 'Gaddige' and took such drastic measures defying the norms of society that he made menstruating women, arrack, bhang smoking, eating meat as symbols of rebellion. This movement is hence identified as the parallel philosophy and people in extremely large number follow it to this day.This is even propagated as the religion of the"aboriginals" and the Vedic practices as ' outside' influences. The followers of Manteswamy and Siddappaji are called Neelagaras and there are many nomadic troupes of epic singers who have kept up the heritage in all seriousness in Mandya, Mysuru, Ramanagara, Chamarajanagara and even rural Bengaluru regions. The epic very powerfully destroys the given notions of pure and impure and advocates 'inner' truth. It is extremely beautiful to listen to and every Kannadiga worth his salt sways to its tune. This epic conservation project has been taken up by both state and national culture ministries.
The Siddappaji and Manteswamy fairs are of utmost significance to lakhs and lakhs of people and they have a ritual of coming to Chikkallur for the fair, cook meat, eat and also serve to all, sing Siddappaji songs, dance, pull the chariot and take part in all rituals and disperse. The number of sheep, goats slaughtered during the fair is some 20,000 (in 2012). It is not done on a mass scale at one place but each family or group slaughters its own sheep or goat, cooks it, eats and disperse.Siddappaji and Manteswamy fairs are of utmost significance to lakhs and lakhs of people and they have a ritual of coming to Chikkallur for the fair, cook meat, eat and also serve to all, sing Siddappaji songs, dance, pull the chariot and take part in all rituals and disperse. The number of sheep, goats slaughtered during the fair is some 20,000 (in 2012). It is not done on a mass scale at one place but each family or group slaughters its own sheep or goat, cooks it, eats and disperse.Now, with this background, the government decidedto ban meat eating during Chikkallur fair. This is nothing but selective oppression because the Manteswamy legend cannot do without meat, liquor, bhang. In other words, it becomes totally meaningless and this is nothing short of an attempt at making it a Vedic ritual. (Even in Vedic times, animal sacrifices were totally accepted, that's a different debate.) But why would the government ban meat eating during Chikkallur fair? On what grounds? This is not a ritual sacrifice at the temple, but a normal slaughter for food. No meat goes waste as all is consumed. This has no connection to ban on beef also as only sheep and goats are slaughtered. So what is the problem? On the one hand the culture czars want to preserve the folk tradition and on the other give dictums as to how it should be preserved.That is not acceptable.
If any - even minute - modification is suggested to the tradition then it is astrong step towards advocating monolithic society, destroying the diversity. That is cruel and dangerous. A group of youngsters from the region, led by youngwriter Rajendra Prasad from Mandya have started asignature campaign questioning the Chief Minister on this. (www.change.org/p/chief-minister-of-karnataka) The website says the use of Bhang was banned some years ago and the young had agreed more or less to it but the old elderly did it without heeding to the ban. Now the ban on meat issued by the Karnataka High Court following an application by Vishvaprani Kalyana Mandali has angered one and all. The DC is making al ot effort atcheck posts to see that not a single hen crosses theborder. (Lakhs of devotees come from neighboring states .) The people are asking the court and the government on this ban on food. In the social media, heated arguments are happening debating this ban. Avadhimag , a popular portal, offered a special platform for this debate and a large number are at each other's throat, as the issue has turned into caste-based argument. By reading all the arguments, I get a feeling those opposing meat eating at the Chikkallur fair have no understanding of the community that celebrates the Manteswamy legend.Those who are fighting to keep the ritual intact are hurt by the total lack of empathy by the governmentand the court. This is not like an appeal to give up crackers on Diwali, this is much more serious. Let Siddappaji jatre be, do not touch it. No harm has come of it since the six centuries it has been going on and no harm can be anticipated in the future.
If the sanatanis still insist on poking their nose into the affairs of the community that is neither imposing its beliefs and customs on them nor is determined to give up for the sake of pleasing a community that has always looked it down. All they have to do is give a call " Siddayya swamy bannee...."
ಅಭಿವೃದ್ಧಿ ಪಥದತ್ತ ನಡೆದ ಚಿಕ್ಕಲ್ಲೂರು ಹೊಸ ಮಠ
Published on: 16 Jan 2014
ಕೊಳ್ಳೇಗಾಲ: ಹಲವು ಐತಿಹ್ಯಗಳನ್ನು ಸಾರುವ ಚಿಕ್ಕಲ್ಲೂರು ಹೊಸ ಮಠ ದಾನಿಗಳು ಹಾಗೂ ಭಕ್ತಾಧಿಗಳು ನೀಡುವ ದೇಣಿಗೆ ಮತ್ತು ಕಾಣಿಕೆಗಳಿಂದ ಈಗಾಗಲೇ ಕೋಟ್ಯಂತರ ರು. ವೆಚ್ಚದಲ್ಲಿ ಹೊಸ ಮಠ ನವೀವಿಕರಣಗೊಳ್ಳುತ್ತಿದ್ದ, ಇನ್ನು ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಕ್ಷೇತ್ರದ ಹೊಸಮಠದಲ್ಲಿಯೇ ಮಂಟೇಸ್ವಾಮಿಯ ಮೂಲ ಕಂಡಾಯ ಇಲ್ಲಿದೆ. ಹಲವು ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಬಳಿ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ಜರುಗಲಿದೆ.ಆದರೆ ಮೂಲ ಗದ್ದಿಗೆಯುಳ್ಳ ಹೊಸ ಮಠ ಮಾತ್ರ ಅಷ್ಟಾಗಿ ಅಭಿವೃದ್ಧಿ ಕಾಣದಿರುವುದು ಭಕ್ತಾಧಿಗಳಲ್ಲಿ ಅಸಮಾಧಾನಕ್ಕೆ ಏಡೆ ಮಾಡಿಕೊಟ್ಟಿದೆ.
ಅಭಿವೃದ್ಧಿಯ ಹಾದಿಯಲ್ಲಿ ಕ್ಷೇತ್ರ: ಶ್ರೀಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಹೊಸಮಠದಲ್ಲಿ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇಲ್ಲಿ ಸಿದ್ದಪ್ಪಾಜಿಯ 52 ವಿವಿಧ ಮಜಲುಗಳನ್ನು ಚಿತ್ರಿಸಲಾಗಿದೆ. ಸಿದ್ದಪ್ಪಾಜಿ ಜನ್ಮದಿಂದ ಅವರು ಐಕ್ಯರಾಗುವವರೆಗಿನ ವೃತ್ತಾಂತಗಳ ಚರಿತ್ರೆಯನ್ನು ಬಿಂಬಿಸಲಾಗುತ್ತಿದೆ.
ಹೊರಭಾಗದಲ್ಲಿ ಮೂಲ ಕಂಡಾಯವನ್ನು ಹಲವು ವಿಧಿ ವಿಧಾನಗಳಿಂದ ಮಜ್ಜನಕೊಳ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ಇನ್ನು ಮಜ್ಜನ ಕೊಳದ ಮೇಲ್ಭಾಗದಲ್ಲಿ ವೃತ್ತಾಕಾರದಲ್ಲಿ ಚಿತ್ರಿತಗೊಳಿಸಿರುವ 12 ರಾಶಿ, 9 ಗ್ರಹಗಳು ಸೇರಿದಂತೆ ಇತರೆ ಚಿತ್ರಪಟಗಳನ್ನು ಚಿತ್ರಿಸಲಾಗಿದೆ. ಮಜ್ಜನ ಕೊಳದ ಸಮೀಪದಲ್ಲೆ ಆಂಜನೇಯಮೂರ್ತಿ ಪಟ ಕಾಣಿಸಿದ ಹಿನ್ನೆಲೆ ಮೇಲ್ಭಾಗದಲ್ಲಿ ಗಣೇಶ ಹಾಗೂ ಆಂಜನೇಯನ ಬೃಹತ್ ವಿಗ್ರಹಗಳನ್ನು ಸ್ಥಾಪಿಸಲಾಗಿದ್ದು ವಿಗ್ರಹ ಉತ್ತಮ ರೀತಿ ಮೂಡಿ ಬಂದಿದ್ದು ಭಕ್ತಾಧಿಗಳ ಪ್ರಶಂಸೆಗೂ ಭಾಜನವಾಗಿದೆ. ಅಭಿವೃದ್ಧಿಯಿಂದ ಹಿಂದೆ ಹಳೇ ಮಠ: ಸಿದ್ದಪ್ಪಾಜಿ ಐಕ್ಯರಾದ ಐತಿಹ್ಯ ಸ್ಥಳವಾದ ಹೊಸಮಠ ಹಾಗೂ ದೇವಸ್ಥಾನ ಅಷ್ಟಾಗಿ ಅಭಿವೃದ್ಧಿ ಕಂಡಿಲ್ಲ. ಹೊಸಮಠಕ್ಕಿಂತ ಹೆಚ್ಚು ಆದಾಯ ದೊರೆಯುವುದೆ ಹಳೆ ಮಠದ ಟ್ರಸ್ಟಿಗಳು ಹಾಗೂ ಪದಾಧಿಕಾರಿಗಳಿಗೆ. ಆದರೆ ಪ್ರತಿವರ್ಷವೂ ಬರುವ ಆದಾಯ ಹೆಚ್ಚಾಗುತ್ತಿದೆಯೇ ವಿನಾ ಭಕ್ತಾಧಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ಹಳೆ ಮಠ ವಿಫಲವಾಗಿದೆ. ಹೊಸಮಠ ಭಕ್ತಾಧಿಗಳ ಕಾಣಿಕೆ ನೆರವಿನಿಂದ ಅಭಿವೃದ್ಧಿಗೆ ಮುಂದಾದರೆ, ಹಳೆ ಮಠ ಮಾತ್ರ ಬರುವ ಆದಾಯದಲ್ಲಿ ಕಿಂಚಿತ್ತೂಭಕ್ತಾಧಿಗಳಿಗೆ ಸೌಲಭ್ಯ ಕಲ್ಪಿಸಿ ಕ್ಷೇತ್ರದಲ್ಲಿ ಮಳಿಗೆ, ಉತ್ತಮ ತಂಗುದಾಣ ಸೇರಿದಂತೆ ಯಾವುದೆ ಸೌಲಭ್ಯ ಕಲ್ಪಿಸಿಲ್ಲ. ದೇಗುಲದ ಅಭಿವೃದ್ಧಿಗೂ ಆದ್ಯತೆ ನೀಡಿಲ್ಲ ಎಂಬುದು ಭಕ್ತಾಧಿಗಳ ಕೊರಗಾಗಿದ್ದು ಮುಂದಿನ ದಿನಗಳಲ್ಲಿ ಹೊಸ ಮಠದಂತೆ ಹಳೆ ಮಠವೂ ಸಹಾ ಸಮಗ್ರ ಅಭಿವೃದ್ಧಿಯಾಗಬೇಕು ಎಂಬುದು ಭಕ್ತಾಧಿಗಳ ಆಗ್ರಹವಾಗಿದೆ. ಪ್ರತಿ ಬಾರಿ ಜಾತ್ರೆಯಲ್ಲಿ ಬಹುತೇಕವಾಗಿ ಸೌಲಭ್ಯ ಕಲ್ಪಿಸುವುದು ಮಾತ್ರ ಜಿಲ್ಲಾಡಳಿತ ಆದರೆ ಬರುವ ಆದಾಯ ಪಡೆಯುವ ದೇಗುಲ ಆಡಳಿತ ಮಂಡಳಿ ಸಮಗ್ರ ಅಭಿವೃದ್ಧಿಗೂ ಚಿಂತಿಸಬೇಕು ಎಂಬುದು ಭಕ್ತರ ಒತ್ತಾಯ. ಮುಂದಿನ ಜಾತ್ರೆ ಸಂದರ್ಭಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಗುರಿ ಹೊಂದಲಾಗಿದೆ. ಕ್ಷೇತ್ರವನ್ನು ಯಾತ್ರಾ ಸ್ಥಳವನ್ನಾಗಿ ಪರಿವರ್ತಿಸಿ ಭಕ್ತಾಧಿಗಳನ್ನು ಆಕರ್ಷಿಸಿ ಸೌಲಭ್ಯ ಕಲ್ಪಿಸಬೇಕು ಎಂಬುದು ನಮ್ಮ ಉದ್ದೇಶ. ದಾನಿಗಳ ಹಾಗೂ ಭಕ್ತರ ಕಾಣಿಕೆಯಿಂದ ಜಾತ್ರೆ ಸಂದರ್ಭದಲ್ಲಿ ಹೊಸ ಮಠಕ್ಕೆ ಬಂದ ಆದಾಯ ಎಲ್ಲವನ್ನೂ ಒಗ್ಗೂಡಿಸಿ ನಾವು ಹೊಸ ಮಠ ಅಭಿವೃದ್ಧಿ ಪಡಿಸುತ್ತಿದ್ದೇವೆ.
- ಸಿದ್ದಾಚಾರ್, ಚಿಕ್ಕಲ್ಲೂರು ಹೊಸಮಠ ಟ್ರಸ್ಟ್ ಕಾರ್ಯದರ್ಶಿ
ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ಜನಸಾಗರ
Published on: 15 Jan 2014
ಕೊಳ್ಳೇಗಾಲ: ವಿಶಿಷ್ಟ ಆಚರಣೆಗಳಿಂದ ಕೂಡಿದ ಪುರಾಣ ಪ್ರಸಿದ್ಧ ಸಿದ್ದಪ್ಪಾಜಿ ಜಾತ್ರೆ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದು,್ದ ಜಾತ್ರೆಗೆ ಶ್ರೀಕ್ಷೇತ್ರದಲ್ಲಿ ಸಿದ್ಧತೆಗಳುಭರ್ಜರಿಯಾಗಿ ನಡೆದಿದೆ.ಜ.15 ರಂದು ಸಂಜೆ ಸಿದ್ದಪ್ಪಾಜಿ ಐಕ್ಯಗೊಂಡ ಸ್ಥಳವಾದ ಹಳೆ ಮಠದ ಸಮೀಪದ ಸಿದ್ದಪ್ಪಾಜಿ ದೇವಾಲಯ ಮುಂಭಾಗದಲ್ಲಿ 7 ಗಂಟೆಗೆ ಘನನೀಲಿ ಸಿದ್ದಪ್ಪಾಜಿ ಚಂದ್ರಮಂಡಲೋತ್ಸವದೊಂದಿಗೆ ವಿದ್ಯುಕ್ತವಾಗಿ ಪ್ರಾರಂಭವಾಗಲಿದೆ. ಜಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಜನಜಾತ್ರೆಯೇ ಹರಿದು ಬರಲಿದೆ.
ಏನೇನು ಆಚರಣೆ: 16ರಂದು ಮಂಟೇಸ್ವಾಮಿ ಕಂಡಾಯ ಮೆರವಣಿಗೆ ಹಾಗೂ ಉತ್ಸವ ಹೊಸ ಮಠ ಹಾಗೂ ಹಳೆ ಮಠದಲ್ಲಿ ಜರುಗಲಿವೆ. 17 ರಂದು ಗದ್ದಿಗೆ ಪೂಜೆ, ಮುಡಿಸೇವೆ ಹಾಗೂ ವಿವಿಧ ಉತ್ಸವ ಜರುಗಲಿವೆ. 18 ರಂದು ಪಂಕ್ತಿಸೇವೆ ಜರುಲಿದ್ದು ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಎಗ್ಗಿಲ್ಲದೆ ಕೋಳಿ ಬಲಿ: ಪಂಕ್ತಿಸೇವೆಯೆಂದು ಹೊಸ ಮಠದಲ್ಲಿ ಸಿದ್ದಪ್ಪಾಜಿ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.ಪಂಕ್ತಿಸೇವೆಯಂದು ಸಾವಿರಾರು ಸಂಖ್ಯೆಯಲ್ಲಿ ಕುರಿ, ಕೋಳಿ ಹಾಗೂ ಮೇಕೆಗಳ ಬಲಿ ಎಗ್ಗಿಲ್ಲದೆ ನಡೆಯಲಿದೆ. ಪ್ರಾಣಿ ಬಲಿ ನೀಡದಂತೆ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ. 19ರಂದು ಹಲಗೂರು ಚಲ್ಲಾಪುರ ಪಂಚಾಳ ಶಿಲ್ವಿಗಳ ದಿವ್ಯ ಸ್ಮರಣೋತ್ಸವ, 20 ರಂದು ಮುತ್ತತ್ತಿರಾಯನ ಸೇವೆಯೊಂದಿಗೆ ಜಾತ್ರೆಗೆ ತೆರೆಬೀಳಲಿದೆ. ಜಾತ್ರೆಯ ಹಿನ್ನೆಲೆ ಹಳೆ ಮಠದ ದೇವಸ್ಥಾನದಿಂದ ಈಗಾಗಲೇ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ 21ಲಕ್ಷ ರು.ಗಳಿಗೆಹಾಗೂ ಕೊತ್ತನೂರು ಪಂಚಾಯ್ತಿ ವತಿಯಿಂದ ಚೆಕ್ಪೋಸ್ಟ್ ಹರಾಜು ಪ್ರಕ್ರಿಯೆ 3.5 ಲಕ್ಷಕ್ಕೆ ಟೆಂಡರ್ ನಡೆಸಲಾಗಿದೆ. ದ್ವಿಚಕ್ರ ವಾಹನಗಳಿಂದ ಯಾವುದೆ ಶುಲ್ಕ ವಸೂಲಿ ಮಾಡುವಂತಿಲ್ಲ. ಬಸ್ಸು ಹಾಗೂ ಲಾರಿಗಳಿಗೆ ಐವತ್ತು ರು. ಆಟೋ ಕಾರುಸೇರಿದಂತೆ ಇತರೆ ವಾಹನಗಳಿಂದ ನಲವತ್ತು ರು. ಪಡೆಯಲಾಗುತ್ತಿದೆ.
ತಾತ್ಕಾಲಿಕ ಡೇರಾ: ಈಗಾಗಲೇ ಚಿಕ್ಕಲ್ಲೂರು ಜಾತ್ರೆ ಹಿನ್ನೆಲೆ ಕಳೆದ ಮೂರುದಿನಗಳಿಂದಲೂ ಶ್ರೀಕ್ಷೇತ್ರಕ್ಕೆ ಆಗಮಿಸವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ಭಕ್ತಾದಿಗಳು ಚಂದ್ರಮಂಡಲದ ಬಳಿಕ ಪೂಜೆ ಸಲ್ಲಿಸಿ ಹಿಂತಿರುಗಿದರೆ ಇನ್ನು ಲಕ್ಷಾಂತರ ಭಕ್ತಾಧಿಗಳು ಮುಡಸೇವೆ ಹಾಗೂ ಪಂಕ್ತಿಸೇವೆ ಮುಗಿದ ಬಳಿಕವೇ ಹಿಂತಿರುಗುತ್ತಾರೆ. ಶ್ರೀಕ್ಷೇತ್ರದ ದೇಗುಲದ ಜಾಗ ಹಾಗೂ ರೈತರ ಜಮೀನುಗಳಲ್ಲಿ ತಾತ್ಕಾಲಿಕ ಡೇರಾ ಹಾಕಿಕೊಂಡು ಮೊಕ್ಕಾಂ ಹೂಡಿದ್ದಾರೆ. ಕೆಲವು ತಾತ್ಕಾಲಿಕ ಅಂಗಡಿ ಮಳಿಗೆಯವರು ಈಗಾಗಲೇ ಜಾತ್ರೆ ವ್ಯಾಪಾರ ಪ್ರಾರಂಭಿಸಿದ್ದಾರೆ. ಜಾತ್ರೆಗೆ ಮಿಠಾಯಿ, ಸಿಹಿ ಬೊಂದಿ, ಬಾಸುಂದಿ, ಖಾರ ಸೇರಿದಂತೆ ಇತರೆ ತಿಂಡಿ ತಿನಿಸು ತಯಾರಿ ಭರದಿಂದ ಸಾಗುತ್ತಿದೆ. ಹತ್ತಕ್ಕೂ ಹೆಚ್ಚು ಮಿಠಾಯಿ ಮಳಿಗೆಗಳು ಇಲ್ಲಿವೆ. ಹತ್ತಾರು ಲಕ್ಷ ವಹಿವಾಟು ದಾಟಲಿದೆ ಎನ್ನುತ್ತಾರೆ ವ್ಯಾಪಾರಿಗಳು. ತಾತ್ಕಾಲಿಕ ಹೋಟೆಲ್ಗಳು ಸಹಾ ಐದು ದಿನದ ಅವಧಿಯಲ್ಲಿ 20 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುತ್ತಾರೆ. ಅಷ್ಟರ ಮಟ್ಟಿಗೆ ಜನಸಾಗರ ಪಾಲ್ಗೊಳ್ಳಲಿದೆ.
ಕ್ಷೇತ್ರದಲ್ಲಿ ಧೂಪ್ ಮಾರುತ್ತಿರುವ ಮಕ್ಕಳು ಕೊಳ್ಳೇಗಾಲ: ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲೆ ಬಿಟ್ಟ ಮಕ್ಕಳು ಸೇರಿದಂತೆ ಹಲವು ಮಕ್ಕಳು ದೂಫ, ಹಣ್ಣು ಜವನ ಮಾರಾಟದಲ್ಲಿ ನಿರತರಾಗಿದ್ದಾರೆ. ಅಲ್ಲದೆ ಹೂವು ಕಟ್ಟುವ ಕಾಯಕದಲ್ಲಿಯೂ ಮಕ್ಕಳು ಪಾಲ್ಗೊಂಡಿದ್ದಾರೆ. ಸಿದ್ದಪ್ಪಾಜಿ ದೇವಾಲಯ ಮುಂಭಾಗ ಮಕ್ಕಳು ಮಾರಾಟದಲ್ಲಿ ನಿರತರಾಗಿರುವುದು ಮಕ್ಕಳಲ್ಲೂ ವ್ಯಾಪಾರಿಕರಣ ಮನೋಭಾವಕ್ಕೆ ಪೋಷಕರು ಹಾಗೂ ಸಂಬಂಧಿಗಳು ಮಕ್ಕಳನ್ನು ದೂಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆಲ್ಲ ಸುಮ್ಮನಿರುತ್ತಾರೆ ಎಂಬುದಕ್ಕೆ ಇಗೊಂದು ತಾಜಾ ನಿದರ್ಶನ.
-ಎನ್.ನಾಗೇಂದ್ರಸ್ವಾಮಿ
ನಿಷೇಧದಲ್ಲೂ ಪ್ರಾಣಿ ಬಲಿ
Published on: 19 Jan 2014
ಜ.19 ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯಲ್ಲಿ ಪವಾಡ ಪುರುಷ ಸಿದ್ದಪ್ಪಾಜಿಗೆ ಹರಕೆ ಹೊತ್ತ ಲಕ್ಷಾಂತರ ಭಕ್ತಾಧಿಗಳು ತಾವು ತಂದ ಕೋಳಿ, ಆಡು ಹಾಗೂ ಕುರಿಗಳನ್ನು ಬಲಿ ನೀಡಿ ಲಕ್ಷಾಂತರ ಮಂದಿಯೊಂದಿಗೆ ಸಹ ಭೋಜನ ಮಾಡುವ ಪಂಕ್ತಿ ಸೇವೆ ನೆರವೇರಿಸಿದರು.ಶ್ರೀಕ್ಷೇತ್ರದಲ್ಲಿ ಬಲಿ ನೀಡದಂತೆ ಜಿಲ್ಲಾಡಳಿತ ನಿಷೇಧ ಹೊರಡಿಸಿತ್ತು. ಅಲ್ಲದೆ 40 ಸಾವಿರ ಜಾಗೃತಿ ಕರಪತ್ರವನ್ನು ಪೊಲೀಸ್ ಇಲಾಖೆ ಹಂಚುವ ಮೂಲಕ ಹಾಗೂ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಸಂಘದ ದಯಾನಂದಸ್ವಾಮೀಜಿ ನೇತೃತ್ವದಲ್ಲಿ ಪ್ರಾಣಿ ಬಲಿ ನೀಡದಂತೆ ಯಾತ್ರೆ ನಡೆಸಲಾಗಿತ್ತು.ಆದರೆ, ಶ್ರೀಕ್ಷೇತ್ರದ ಪಂಕ್ತಿ ಸೇವೆಯ ದಿನವಾದ ಶನಿವಾರ ಬೆಳಗಿನಿಂದಲೆ ಭಕ್ತರು ತಾವು ತಂದ ಕುರಿ, ಕೋಳಿಗಳನ್ನು ಬಲಿ ನೀಡಿ ಅಡುಗೆ ತಯಾರಿಸುವ ಮೂಲಕ ಸಿದ್ದಪ್ಪಾಜಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.ಭಕ್ತರು ತಾವು ತಂದ ಪ್ರಾಣಿಗಳನ್ನು ಕತ್ತರಿಸುವ ದೃಶ್ಯ ಹಾಗೂ ಅವುಗಳು ವಿಲವಿಲನೆ ಒದ್ದಾಡಿ ಪ್ರಾಣ ಬಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಚಿಕ್ಕಲ್ಲೂರು ಸಿದ್ದಪ್ಪಾಜಿ ದೇಗುಲದ ಸುತ್ತ ಪ್ರಾಣಿ ಬಲಿ ನಿಷೇಧಿಸಲಾಗಿತ್ತು. ಆದರೂ ದೇವಾಲಯ ಸುತ್ತ ಹಾಗೂ ಹಳೆ ಮಠದ ಹಿಂಬದಿಯಲ್ಲಿ ಸುತ್ತಮುತ್ತ ನೆರೆದಿದ್ದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ಬಲಿ ನೀಡಿದರು.ಪದ್ಧತಿಗೆ ಅಪಚಾರ: ಪ್ರಾಣಿ ಬಲಿ ನೀಡದಿದ್ದರೆ ಸಿದ್ದಪ್ಪಾಜಿಗೆಗೆ ಅಪಚಾರ ಮಾಡಿದಂತಾಗುತ್ತದೆ. ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬ ನಂಬಿಕೆಯಿಂದ ಹಾಗೂ ಹರಕೆ ಹೊತ್ತ ಭಕ್ತಾಧಿಗಳು ಪ್ರಾಣಿ ಬಲಿ ನೀಡಿ ಪಂಕ್ತಿಸೇವೆಯೆಂದು ಸಹಭೋಜನ ನೀಡಿ ಸತ್ಕರಿಸುವುದು ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ ನಡೆದು ಬಂದಿರುವ ಆಚರಣೆ.ಇದಕ್ಕೆ ಧಕ್ಕೆಯಾದರೆ ಅಪಚಾರವಾಗಲಿದೆ ಎಂಬ ನಂಬಿಕೆ ಭಕ್ತಾಧಿಗಳದ್ದಾಗಿದೆ.ಒಟ್ಟಿನಲ್ಲಿ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿದ ಲಕ್ಷಾಂತರ ಭಕ್ತಾಧಿಗಳು ತಾವು ತಂದ ಕುರಿ ಕೋಳಿಗಳನ್ನು ಬಲಿ ನೀಡಿ, ಜಿಲ್ಲಾಡಳಿತಕ್ಕೆ ಸವಾಲ್ ಹಾಕುವ ಮೂಲಕ ತಮ್ಮ ಆಚರಣೆಗೆ ಧಕ್ಕೆ ತಂದರೆ ನಾವು ಯಾವುದನ್ನು ಲೆಕ್ಕಿಸುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಂತಾಯಿತು.ಬಲಿ ನೀಡುವ ಮೊದಲು ಪೂಜೆ: ಶ್ರೀಕ್ಷೇತ್ರದಲ್ಲಿ ಪ್ರಾಣಿಗಳನ್ನು ಬಲಿ ನೀಡುವ ಮೊದಲು ಭಕ್ತಾಧಿಗಳು ಮಡಿಯುಟ್ಟು ಸಿದ್ದಪ್ಪಾಜಿ ಹೆಸರಿನಲ್ಲಿ ಪೂಜೆ ಸಲ್ಲಿಸಿ ಬಳಿಕ ತಾವು ತಂದ ಪ್ರಾಣಿಗಳಿಗೂ ಪೂಜೆ ನೆರವೇರಿಸಿ ನೀರು ಚಿಮುಕಿಸಲಾಗುತ್ತದೆ. ನೀರು ಬಿದ್ದ ರಭಸಕ್ಕೆ ಪ್ರಾಣಿಗಳು ತಲೆ ಒದುರುತ್ತಿದ್ದಂತೆ ಪ್ರಾಣಿಗಳನ್ನು ಬಲಿ ನೀಡಿ ಅವುಗಳ ಮಾಂಸದಿಂದ ಅಡುಗೆ ತಯಾರಿಸಲಾಗುತ್ತದೆ. ಅಡುಗೆ ತಯಾರಾದ ಬಳಿಕ ಸಂಬಂಧಿಗಳು ಹಾಗೂ ಹಿತೈಷಿಗಳನ್ನು ಆಹ್ವಾನಿಸಿಸಹಭೋಜನ ನೀಡಿ ಸತ್ಕರಿಸುವುದು ಪಂಕ್ತಿ ಸೇವೆಯ ಮೂಲ ಉದ್ದೇಶ. ಪಂಕ್ತಿಸೇವೆಯಲ್ಲಿ ಸಹಭೋಜನ ಸೇವಿಸಲು ಲಕ್ಷಾಂತರ ಭಕ್ತಾಧಿಗಳು ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಸಿದ್ದಪ್ಪಾಜಿ ಕೃಪೆಗೆ ಪಾತ್ರರಾದರು.ಬಸವನಿಂದ ದಾಟಿಸಿಕೊಂಡ ಭಕ್ತರುಕೊಳ್ಳೇಗಾಲ: ಪವಾಡ ಪುರುಷ ಸಿದ್ದಪ್ಪಾಜಿ ಜಾತ್ರೆಯ ಅಂಗವಾಗಿ ಹೊಸ ಮಠ ಹಾಗೂ ಹಳೆ ಮಠಗಳೆರಡರಲ್ಲೂ ಬಸವನಿಂದ ದಾಟಿಸಿಕೊಳ್ಳುವ ಸಂಪ್ರದಾಯವಿದೆ.ಕಂಡಾಯ ಮೆರವಣಿಗೆ ಶುಭಸಂಕೇತ ಬಸವ. ಈಹಿನ್ನೆಲೆ ಕಂಡಾಯ ಮೆರವಣಿಗೆಗೆ ಮೊದಲು ಬಸವನನ್ನು ಕರೆತಂದು ಬಸವ ಆಗಮನದ ಬಳಿಕ ಕಂಡಾಯ ಹೊರಲಾಗುತ್ತದೆ. ಬಸವನನ್ನು ಮುಂದೆ ಬಿಟ್ಟುಕಂಡಾಯವನ್ನು ಹೊತ್ತು ತರುವುದು ಸಂಪ್ರದಾಯ, ಅದರಂತೆ ಕಂಡಾಯವನ್ನು ಹೊಸ ಮಠದಲ್ಲಿ ಶ್ರೀಕ್ಷೇತ್ರದಿಂದ ಮಜ್ಜನ ಕೊಳಕ್ಕೆ ತೆಗೆದುಕೊಂಡು ವಾಪಸ್ಸು ತೆಗೆದುಕೊಂಡು ಹೋಗುವಾಗಮಲಗಿಕೊಂಡ ಭಕ್ತರನ್ನು ಬಸವ ದಾಟಿಕೊಂಡು ಹೋಗುತ್ತದೆ. ಅದರಂತೆ ಹಳೆ ಮಠದಲ್ಲೂ ದರ್ಶನಕ್ಕೆ ಬರುವ ಭಕ್ತರು ಅಲ್ಲಿರುವಬಸವನದಿಂದ ದಾಟಿಸಿಕೊಂಡು ಸಾಗುವ ಆಚರಣೆ ಇಲ್ಲಿದೆ. ಅದರಂತೆ ಕಳೆದ ಎರಡು ದಿನಗಳಿಂದಲೂ ಲಕ್ಷಾಂತರ ಭಕ್ತಾಧಿಗಳು ಇಂತಹ ಹಲವಾರು ಆಚರಣೆಗಳಲ್ಲಿ ಪಾಲ್ಗೊಂಡಿದ್ದರು.ಉತ್ಸವಕ್ಕೆ ಸಾಕ್ಷಿಯಾದ ಭಕ್ತರುಕೊಳ್ಳೇಗಾಲ: ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ಹಿನ್ನೆಲೆ ಹೊಸ ಮಠದಲ್ಲಿ ಶನಿವಾರ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಭಕ್ತಾಧಿಗಳು ಮೂಲ ಕಂಡಾಯ ಇರುವ ಹೊಸಮಠದಲ್ಲಿ ವಿಧಿ ವಿಧಾನಗಳೊಂದಿಗೆ ಪೂಜೆಯಲ್ಲಿ ಪಾಲ್ಗೊಂಡರು. ಹೊಸ ಮಠದಲ್ಲಿ ಹುಲಿವಾಹನೋತ್ಸವ, ಗಜವಾಹನ ಉತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಪಂಕ್ತಿ ಸೇವೆ ಸೇರಿದಂತೆ ಇತರೆ ಆಚರಣೆಗಳು ಜರುಗಿದವು. ಭಾನುವಾರ ಬೆಳಗ್ಗೆ ಮುತ್ತತ್ತಿ ಆಂಜನೇಯಸ್ವಾಮಿ ಸೇವಾ ಮಹೋತ್ಸವ ಬಳಿಕ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ತೆರೆ ಬೀಳಲಿದೆ.ಧೂಳು: ಕರವಸ್ತ್ರದ ಮೊರೆಜಿಲ್ಲೆಯ ವಿವಿಧ ಗ್ರಾಮಗಳಿಂದ ಹಾಗೂ ಮಂಡ್ಯ, ರಾಮನಗರ ಸೇರಿದಂತೆ ಹಲವೆಡೆಯಿಂದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿಗೆ ಭಕ್ತಾಧಿಗಳು ದ್ವಿಚಕ್ರವಾಹನ, ಟಾಟಾಸುಮೋಗಳಲ್ಲಿ ಆಗಮಿಸಿದ್ದರು. ರಸ್ತೆಗಳಲ್ಲಿ ಧೂಳಿನ ಸಿಂಚನ ಭಕ್ತರನ್ನು ರಾಚುವಂತಿತ್ತು. ಈ ಧೂಳಿನ ಸೇವನೆ ತಪ್ಪಿಸಿಕೊಳ್ಳಲು ಹಲವರು ಕರವಸ್ತ್ರ ಮೊರೆ ಹೊಕ್ಕಿದ್ದರು.ನೀರಿಗಾಗಿ ಭಕ್ತರ ಪರದಾಟಭಕ್ತಾಧಿಗಳು ಪಂಕ್ತಿಸೇವೆಯಂದು ನೀರಿಗಾಗಿ ಪರದಾಟ ನಡೆಸಿದರು. ಶ್ರೀಕ್ಷೇತ್ರದಲ್ಲಿ ಹಲವೆಡೆ ಜಿಪಂ ವತಿಯಿಂದ ತಾತ್ಕಾಲಿಕ ನಲ್ಲಿ, ಕೊಳವೆ ಬಾವಿಗಳನ್ನು ಅಳವಡಿಸಲಾಗಿದ್ದರೂ, ಐದು ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತಾಧಿಗಳು ಜಾತ್ರೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ನೀರಿಗಾಗಿ ಬವಣೆ ಪಡುವಂತಾಯಿತು. ಕೆಲವು ಭಕ್ತಾಧಿಗಳು ನೀರು ಹತ್ತಿರದಲ್ಲಿ ದೊರಕುವ ಕಡೆ ಅಡುಗೆ ತಯಾರಿಸಿದ್ದರೆ ಇನ್ನು ಕೆಲವು ಭಕ್ತಾಧಿಗಳು, ದೂರದ ಜಮೀನಿನಲ್ಲಿ ಅಡುಗೆ ತಯಾರಿಸಿದ್ದ ಕಾರಣ ನೀರಿಗಾಗಿ ಪರದಾಟ ನಡೆಸುವಂತಾಯಿತು.
ಶ್ರೀ ಸಿದ್ದಪ್ಪಾಜಿ ಜಾತ್ರೆಗೆ ಚಿಕ್ಕಲ್ಲೂರು ಸಜ್ಜು
Published on: Wed, 01/15/2014
ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಜ.15ರಿಂದ ಪ್ರಾರಂಭವಾಗುವ ಜಾತ್ರೆಗೆ ಸಜ್ಜಾಗುತ್ತಿರುವ ಸಿದ್ದಪ್ಪಾಜಿ ಮಠ.
ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ಜ. 15ರಿಂದ 19ರವರೆಗೆ ನಡೆಯಲಿರುವ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವಕ್ಕೆ ಚಿಕ್ಕಲ್ಲೂರು ಸಜ್ಜುಗೊಳ್ಳುತ್ತಿದೆ. ಪ್ರತಿವರ್ಷದಂತೆ ಐದು ದಿನಗಳ ಕಾಲ ನಡೆಯಲಿರುವ ದೊಡ್ಡ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ದೇವಾಲಯ, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಸಿದ್ಧವಾಗಿದೆ.ಈ ವರ್ಷ 5 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನೀರಿಕ್ಷೆ ಇದೆ. ಈಗಾಗಲೇ ಅಂಗಡಿ ಮುಂಗಟ್ಟುಗಳು ಜಾತ್ರೆಮಾಳದಲ್ಲಿ ತಲೆ ಎತ್ತಿವೆ. ಜಾತ್ರೆಯ ಸ್ಥಳ, ದೇವಾಲಯದ ಸುತ್ತಮುತ್ತ ವರ್ಣಮಯ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿದೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ, ಭಕ್ತರಿಗೆ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ. ಜ. 15ರಂದು ನೀಲಗಾರರ ಸಾಂಪ್ರದಾಯಿಕ ವಿಧಿವಿಧಾನಗಳೊಡನೆ ಚಂದ್ರಮಂಡಲೋತ್ಸವ ನಡೆಯಲಿದೆ. ಜ. 16ರಂದು ಹುಲಿವಾಹನೋತ್ಸವ, ಜ. 17ರಂದು ರುದ್ರಾಕ್ಷಿ ಮಂಟಪೋತ್ಸವ(ಮುಡಿಸೇವೆ), ಜ. 18ರಂದು ಗಜವಾಹನೋತ್ಸವ (ಪಂಕ್ತಿಸೇವೆ), ಜ. 19ರಂದು ಮುತ್ತುರಾಯರ ಸೇವೆಯೊಡನೆ ಜಾತ್ರೆಗೆ ತೆರೆಬೀಳಲಿದೆ. ಮಂಟೇಸ್ವಾಮಿ ಪ್ರತಿಷ್ಠಾನದ ವತಿಯಿಂದ ಈ ವರ್ಷ ರಂಗಾಯಣ ನಿರ್ದೇಶಕ ಜನಾರ್ದನ್ ಮತ್ತು ಚಾಮರಾಜನಗರ ತಾಲ್ಲೂಕು ದೊಡ್ಡಮೋಳೆ ಹಾಡುಗಾರ ಪಿ. ಸಿದ್ದಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ.
ಖಾಸಗಿ ಬಸ್ಗಳಿಗೆ ಕಡಿವಾಣ: ಈ ವರ್ಷ ಚಿಕ್ಕಲ್ಲೂರು ಜಾತ್ರೆಗೆ ಭಕ್ತರ ಪ್ರಯಾಣಕ್ಕೆ ಕೆಎಸ್ಆರ್ಟಿಸಿ ಬಸ್ಗಳಿಗೆ ಮಾತ್ರ ಅವಕಾಶ ಕಲ್ಪಿಸುವ ಮೂಲಕ ಖಾಸಗಿ ಬಸ್ಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಆರ್ಟಿಒ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದ್ದಾರೆ. ಕೊಳ್ಳೇಗಾಲ ಕೆಎಸ್ಆರ್ಟಿಸಿ ಬಸ್ ಡಿಪೋದಿಂದ 80 ಬಸ್ಗಳನ್ನು ಚಿಕ್ಕಲ್ಲೂರು ಜಾತ್ರೆಗೆ ನಿಯೋಜಿಸಿದೆ. ಕೊಳ್ಳೇಗಾಲದಿಂದ ಚಿಕ್ಕಲ್ಲೂರಿಗೆ ₨ 30ನ್ನು ನಿಗದಿಪಡಿಸಲಾಗಿದೆ ಎಂದು ವ್ಯವಸ್ಥಾಪಕ ಮಹೇಶ್ ತಿಳಿಸಿದ್ದಾರೆ.
ಸಿಸಿ ಟಿವಿ ಅಳವಡಿಕೆ: ಪೊಲೀಸ್ ಸರ್ಪಗಾವಲುಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ಜ. 15ರಿಂದ 19ರವರೆಗೆ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿಭದ್ರತೆ ಕೈಗೊಂಡಿದೆ. ಹೈಕೋರ್ಟ್ನ ನಿರ್ದೇಶನದಂತೆ ಈ ಬಾರಿ ಜಾತ್ರೆಯಲ್ಲಿ ಸಂಪೂರ್ಣವಾಗಿ ಪ್ರಾಣಿಬಲಿ ನಿಷೇಧಿಸಲಾಗಿದೆ. ಈ ಸಂಬಂಧ ಚಿಕ್ಕಲ್ಲೂರಿಗೆ ಬಂದು ಸೇರುವ ಎಲ್ಲ ಮಾರ್ಗಗಳಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದೆ. ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಮಾಡಿ ಜಾತ್ರಾ ಸ್ಥಳಕ್ಕೆ ಪ್ರಾಣಿಗಳನ್ನು ತೆಗೆದುಕೊಂಡು ಹೋಗುವುದನ್ನು ತಡೆಗಟ್ಟಲಾಗುವುದು. ಸರಗಳ್ಳರು ಹಾಗೂ ಕಳ್ಳರ ಬಗ್ಗೆ ನಿಗಾವಹಿಸಲು ಅಪರಾಧ ಪತ್ತೆ ತಂಡ ರಚಿಸಲಾಗಿದೆ. ಈ ತಂಡದಲ್ಲಿ ಜಿಲ್ಲೆಯ ಹಾಗೂ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಯ ಸಿಬ್ಬಂದಿ ಇದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಸೂಕ್ತ ನಿಗಾ ಇಡಲಾಗುವುದು. ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಬಾಣೂರು ಗೇಟ್ನಿಂದ ಬಾಣೂರು - ಸುಂಡ್ರಳ್ಳಿ ಮಾರ್ಗವಾಗಿ ಹೊಸ ಮಠದ ಹಿಂಭಾಗದ ಪಾರ್ಕಿಂಗ್ ಸ್ಥಳ ತಲುಪಿ ಅಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅದರ ನಂತರ ಹೊಸ ಮಠದ ಬಳಿಯ ಹಳ್ಳದ ಪಕ್ಕದಲ್ಲಿರುವ ಜಮೀನಿನಲ್ಲಿ ಬಸ್ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಏಕಮುಖ ಸಂಚಾರ ವ್ಯವಸ್ಥೆ ಮತ್ತು ಪ್ರಾಣಿ ಬಲಿ ನಿಷೇಧವನ್ನು ಜಾರಿಗೆ ತರಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಕೋರಿದ್ದಾರೆ.
Chikkalur Jatra Utsav
Devotees of Saint Siddappaji are expected to visit Chikkalur in Kollegal taluk to celebrate the five-day Jatra Utsav.
The utsav that begins on a full moon night is held in accordance with the Neelagara tradition.During the utsav, the devotees and the priest of Boppegowdanapura will pray to the ‘Chandramandal’( a 30ft-tall structure made of bamboo and coconut fibres decorated with flowers and surrounded by glowing sticks). The priest will perform a ‘puja’ to ‘Chandramandal’ and light a fire.Those who have taken a ‘harake’ offer their first agricultural produce such as grains, fruits, butter andghee to the burning ‘Chandramandal’. And, an estimation of the annual rainfall and the harvest of crops in the coming year will be made based on the direction of the flame.
THE SCHEDULE:
‘Hulivahanotsav’ will be held on the second day, ‘Mudi seve’ on the third day, ‘Pankti seve’ on the fourth , and ‘Muththatirayana seve’ on the fifth day. Sheep and goats will be sacrificed in the name of Siddappaji and Manteswamy.Meat is used to prepare ‘badoota’ and an intoxicant substance called ‘bangi’ is mixed with it. It is then served to the devotees. The ‘badoota’ is considered ‘prasada’ by devotees - Lord-Siddappaji.mobie.in "
Next Page >
Tell us For Help, Suggestion, Feedback, Support, Query or Complain Please Send E-mail to Admin
Name:
Email:
Message:
Enter text on image:
🎯 Please Bookmark us: Siddappaji.com️ -or- Sri.siddappaji.com -or- Lord.siddappaji.com and Blog.siddappaji.com font>
Dear Devotees Please LIKE Page to Join Us!
ಧರೆಗೆ ದೊಡ್ಡವರು ಶ್ರೀ ಮಂಟೇಸ್ವಾಮಿ Official Page 👍
ಭಗವಾನ್ ಶ್ರೀ ಘನನೀಲ ಸಿದ್ದಪ್ಪಾಜಿ
Siddappaji.com © 2009-17
Home
Contact Us
Advertise
Disclaimer
Official Blog
Terms & Conditions
Log in